08-10-1978; ಭಾನುವಾರ
06:30 ಎದ್ದದ್ದು
08:30 - 11:00 Algebra
12:00 - 02:00 Paper
02:30 - 04:00 ಮೃಚ್ಛಕಟಿಕ (ಕನ್ನಡ ನಾನ್‍ಡೀಟೈಲ್ಡ್ ಟೆಕ್ಸ್ಟ್)
04:00 - 04:45 P. Chemistry
04:45 - 05:30 ಸತ್ಯಕ್ಕನ ಮನೆ (ತಂದೆಯ ಅಕ್ಕ, ಸೋದರತ್ತೆ)
05:30 - 07:30 ಹರಟೆ
07:30 - 08:00 Paper
08:00 - 09:00 P.Chemistry
09:30 - 10:00 Magnetism
10:00 - 11:00 ಪುಸ್ತಕ, ರಾಜಶೇಖರ ಭೂಸನೂರಮಠರ ’ಶುಕ್ರಗ್ರಹದ ಸಾಹಸಿ ಝಿಯಾನ್’
11:00 ನಿದ್ದೆ
ಒಟ್ಟು ಓದು : 6 ಗಂ. 15 ನಿ.
ಅಡಿ ಟಿಪ್ಪಣಿ: (ಬಾಲ್ಯದಿಂದಲೂ ನಾನು pampered with papers. ನಿತ್ಯ ಆರು ಪತ್ರಿಕೆಗಳು ಮನೆಯಲ್ಲಿ ಸರಿದಾಡದಿದ್ದರೆ ಎಂಥದೋ ಕಸಿವಿಸಿ. ಪರೀಕ್ಷೆಗಳ ಸಮಯದಲ್ಲೂ ಎರಡು-ಮೂರು ಗಂಟೆ ಪತ್ರಿಕೆಗಳ ಓದು, ಒಂದೆರಡು ಗಂಟೆಗಳ ಸಾಹಿತ್ಯ ಪಠಣ ಅಭ್ಯಾಸವಾಗಿ ಹೋಗಿತ್ತು.)
09-10-1978; ಸೋಮವಾರ
06:30 ಎದ್ದದ್ದು
07:00 - 07:45 C. Electricity
08:15 - 09:00 ಮೂರ್ತಿ ಮನೆ
09:00 - 01:10 ’ಭಾರತೀಯ ಸಾಹಿತ್ಯಕ್ಕೆ ಕಾರಂತರ ಕೊಡುಗೆ’ ವಿಚಾರ ಗೋಷ್ಠಿ
ಸಹಿ ಸಂಗ್ರಹಣೆ
02:00 - 04:45 ಕಾರಂತರ ‘ಅದೇ ಊರು, ಅದೇ ಮರ’ ಪಠಣ
05:10 - 05:40 Typewriting
06:00 - 10:30 ರಂಗ ಸಂಪದದ ’ಚೋಮ’ ನಾಟಕ
ಸಾಲಿಗ್ರಾಮದ ಕಿರಿಯರಿಂದ ’ದ್ರುಪದ ಗರ್ವಭಂಗ’ ಯಕ್ಷಗಾನ
11:00 ಮನೆಗೆ
11:30 ನಿದ್ದೆ
ಅತ್ಯದ್ಭುತವಾಗಿ ಕಿರಿಯರು ಅಭಿನಯಿಸಿದ್ದು ನೋಡಿ ಆಶ್ಚರ್ಯ.
ಖರ್ಚು
Bus ರು. 0:25
Pen ರು. 2.75
Bus ರು. 0.35
ಒಟ್ಟು ರು. 3.35
ಅಡಿ ಟಿಪ್ಪಣಿ: (ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತೆಂಬ ನೆನಪು. ಬಸ್ ದರವನ್ನು ನೋಡಿದರೆ ಅಲ್ಲಿಯೇ ಇರಬೇಕೆನಿಸುತ್ತದೆ. ಕಾರಂತರನ್ನು ಕಂಡು ಅವರ ಪುಸ್ತಕ ಅಥವಾ ಆಟೋಗ್ರಾಫ್ ಪುಸ್ತಕದ ಮೇಲೆ ಸಹಿ ಹಾಕಿಸಿಕೊಂಡೆ ಅನ್ನಿಸುತ್ತದೆ. ಮನೆಯ ಕಡತಗಳನ್ನು ಜಾಲಾಡಿದರೆ, ಎಲ್ಲಿಯೋ ಸಿಗುತ್ತದೆ.)
10-10-1978; ಮಂಗಳವಾರ
05:15 ಎದ್ದದ್ದು
05:30 - 06:00 ‘ನೆಂಟರು’ (ಬಹುಶಃ ತೀನಂಶ್ರೀಯವರ ಪ್ರಬಂಧ ಸಂಕಲನವಿರಬೇಕು)
09:00 - 10:30
‘ನೆಂಟರು’
10:30 - 11:30 `ಅದೇ ಊರು, .....'
12:30 - 02:00 Electrostatics
02:30 - 04:00 Analytical Geometry
04:00 - 05:00