07-10-1978
ನಾಳೆಯಿಂದ ರಜಾ.
II P.U.C.ಗೆ ಬಂದ್ಮೇಲೆ ಈ ದಿನಚರಿ ಮುಟ್ತಿರೋದು ಇದೇ first. ಮರೆವಿನ ಮಂಪರಿನಿಂದ ಹಳೆಯದನೆಲ್ಲಾ ಬರೆಯಲಿಕ್ಕಾಗುವುದಿಲ್ಲ. ಈಗಾಗಲೇ ಬಹಳ stupid ಆಗುತ್ತಿದ್ದೇನೆ. ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತಿದೆ.
ಅವರಿವರ ದೃಷ್ಟಿಯಲ್ಲಿ ನಾನು.
ಜಯಪ್ಪ: ಈಗಾಗಲೇ ನಾಲ್ಕಾರು ಬಾರಿ ದೃಷ್ಟಿಗೆ ಬಿದ್ದಿದ್ದೀಯಾ. ಒಮ್ಮೆ ಕ್ಲಾಸ್‍ನಲ್ಲಿ ನಗ್ತಿದ್ದಾಗ principalನ meet ಮಾಡು ಅಂದಿದ್ದಕ್ಕೆ ಬರ್ಲಿಲ್ಲಾ.
PVN: ಸೊಳ್ಳೆ ತಿಗಣಿಗಳು ಜೋರಾಗೇ ಮಾತಾಡ್ತಿವೆ. ನನ್ಕಿವಿಗೂ ಈಗಾಗಲೇ ಬಿತ್ತು. (ಸಂದರ್ಭ:- ನಾನೂ ಸುನಿಲ್ ಮಾತನಾಡುತ್ತಿದ್ದಾಗ ’ತಿಗಣಿ’ (ಪ್ರಬಂಧ ವಾಚನ ನಡೆಯುತ್ತಿತ್ತು) ತರಗತಿಯಲ್ಲಿ )
AS: ಬಹಳ ಮಾತನಾಡುತ್ತಿರ್ತಿಯಾ
KVS: ಮೌನ
MKK: Very pleased to meet you !!!
BSV: Then you are also laughing. Come on to the Principal's room. I thought you were a good boy. What is your name? I will contact with your parents. You are in between a set of mischief makers.
MSK: Have you not yet finished your continuous talking.
Gowri Srinivas: Don't you have such manners of asking 'excuse' when you are leaving the class room?
CRG: It is not mere laughing, gentleman.
NAR: ----
KAN: ನೋಡಪ್ಪಾ, ಯಾಕ್ ಗಲಾಟೆ ಮಾಡ್ತೀಯಾ?
KR: Don't talk inside the class room.
GTB: How many times I tell you. You are going on doing mischieves.
RSR: Yes, I am observing you.
BGS: ---
MKN: Can't you sit properly.
MJS: ---
NS: ಏನ್ರೀ, ನಿಮ್ಕೆಲ್ಸ ಎಷ್ಟೋ, ಅಷ್ಟು ನೋಡ್ಕೊಳ್ರಿ.
Guy: Mr.Gentleman, who is talking much
ಅಡಿ ಟಿಪ್ಪಣಿ: (ಮೊದಲ ವರ್ಷದ ಪಿ.ಯು.ಸಿ. ಹೇಗೋ ಕಳೆದಿತ್ತು. ಹೈಸ್ಕೂಲಿನ ಹುಡುಗಾಟ ಮುಂದುವರಿದಿತ್ತು. ಎರಡನೆಯ ವರ್ಷದ ಪಿ.ಯು.ಸಿ.ಗೆ ಬಂದ ಮೇಲೆ ಸ್ವಲ್ಪ ಜವಾಬ್ದಾರಿ ಬಂದಿತ್ತು. ಆದರೆ ತರಲೆ ಬುದ್ಧಿ ಹೋಗಿರಲಿಲ್ಲ. ಶಿಕ್ಷಕರು ನನ್ನ ಬಗ್ಗೆ ಮಾಡಿದ್ದ ಕಾಮೆಂಟ್ಸ್‍ಗಳನ್ನು ನೆನಪಿಸಿಕೊಂಡು ದಸರಾ ರಜೆಯ ಆರಂಭಕ್ಕೆ ಮುನ್ನ ಬರೆದ ದಾಖಲೆಗಳಿವು. ತರಗತಿಗಳಲ್ಲಿ ಇಷ್ಟೆಲ್ಲಾ ಮಾತನಾಡುತ್ತಿದ್ದೆನಾ? ಎಂಬ ಅಚ್ಚರಿ ಮೂಡುತ್ತಿದೆ. BSV - ಬಿ.ಎಸ್.ವೇದಾವತಿ ಎಂಬ ಇಂಗ್ಲಿಷ್ ಪ್ರಾಧ್ಯಾಪಕರು ಚೆನ್ನಾಗಿಯೇ ಪಾಠ ಮಾಡುತ್ತಿದ್ದರು. ಸೈನ್ಸ್ ವಿದ್ಯಾರ್ಥಿಗಳಾದ ನಮಗೆ ಇಂಗ್ಲಿಷ್ ಬಗ್ಗೆ ಅಸಡ್ಡೆ. ಅವರ ಮಾತು ಕೇಳಿ ಇಂಗ್ಲಿಷ್ ಚೆನ್ನಾಗಿ ಕಲಿತು,ಪರೀಕ್ಷೆಯಲ್ಲಿ ಇನ್ನು ಹತ್ತು ಮಾರ್ಕ್ ಹೆಚ್ಚು ತೆಗೆದುಕೊಂಡಿದ್ದರೆ, ದ್ವಿತೀಯ ಪಿ.ಯು. rankಪಟ್ಟಿಯಲ್ಲಿ ಹೆಸರು ನಮೂದಾಗಿರುತ್ತಿತ್ತು. ಇಡೀ ಅಂಕಪಟ್ಟಿಯಲ್ಲಿ ಇಂಗ್ಲಿಷ್ (69/100)ನದೇ ಕನಿಷ್ಟ ಅಂಕಗಳು. KAN - ಕೆ.ಅಮರನಾಥ್ ಭೌತ ವಿಜ್ಞಾನ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಖಾದಿ ಷರ್ಟು, ಪಂಚೆ ಜತೆಗೆ ಅಮಾಯಕ ಮುಖಲಕ್ಷಣ ವಿದ್ಯಾರ್ಥಿಗಳ ಪರಿಹಾಸ್ಯಕ್ಕೆ ಗುರಿಯಾಗಿತ್ತು. ತಮ್ಮದೇ ಖರ್ಚಿನಲ್ಲಿ ನೂರು ನೂರೈವತ್ತು ಪುಟಗಳ ಭೌತವಿಜ್ಞಾನದ solved examplesಗಳನ್ನು ಸೈಕ್ಲೋಸ್ಟೈಲ್ ಮಾಡಿಸಿ ಪ್ರತಿ ವರ್ಷದ ಆರಂಭದಲ್ಲಿಯೇ ಉಚಿತವಾಗಿ ಹಂಚುತ್ತಿದ್ದರು. ಸಂಗೀತ ಸಮಾರಂಭಗಳನ್ನು ಆಯೋಜಿಸುತ್ತಾ ಎಪ್ಪತ್ತೈದು ದಾಟಿದ್ದರೂ ಚಟುವಟಿಕೆಯಿಂದಿರುವ ಅಮರನಾಥ್ ಅವರನ್ನು ಕಳೆದ ತಿಂಗಳು ಬಿ.ಪಿ.ವಾಡಿಯಾ ರಸ್ತೆಯಲ್ಲಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್‌ನಲ್ಲಿ ಭೇಟಿಯಾಗಿದ್ದೆ. ಅಮರನಾಥ್ ನೇತೃತ್ವದ ಸಂಸ್ಥೆ ಪ್ರಾಯೋಜಿಸಿದ್ದ ಪುರಂದರದಾಸರ ಆರಾಧನೆ(?) ಕಾರ್ಯಕ್ರಮದಲ್ಲಿ.ವಾರಿಜಾಶ್ರೀ ಗಾಯನವಿತ್ತು. ಮುಂದಿನ ದಿನಗಳಲ್ಲಿ ಗಲಾಟೆ ಕಡಿಮೆಯಾಗಿ PVN - ಪಿ.ವಿ.ನಾರಾಯಣ ಅವರಿಗೆ ಹತ್ತಿರದವನಾದೆ. AS - ಎ.ಶ್ರೀಪಾದ ಹಾಸ್ಯಪ್ರಜ್ಞೆಯ ಕನ್ನಡ ಮೇಷ್ಟ್ರು ಹಾಗೂ ಜಾನಪದ ಗೀತೆಗಳ ಒಳ್ಳೆಯ ಗಾಯಕ. CRG - ಡಾ.ಸಿ.ಆರ್.ಗೋಪಿನಾಥ್, ಕೆನಡಾ ದೇಶದಲ್ಲಿ ಕೆಲಕಾಲ ಪಾಠ ಮಾಡಿ ಬಂದಿದ್ದವರು. ಭೌತವಿಜ್ಞಾನದ sound ಪಾಠದಲ್ಲಿ
V = n (lambda) ಸೂತ್ರವನ್ನು ಅವರು
ವಿಶಿಷ್ಟ ಶೈಲಿಯಲ್ಲಿ
ವಿವರಿಸುತ್ತಿದ್ದರು. ಜಯಪ್ಪ ಹಾಗೂ ಗೌರಿ ಶ್ರೀನಿವಾಸ (ಇಂಗ್ಲಿಷ್) ಆ ವರ್ಷವಷ್ಟೇ ಪಾಠ ಮಾಡಲು ಬಂದಿದ್ದ cub ಲೆಕ್ಚರರ್‌ಗಳು. ಪ್ರೊ. ಬಿ.ಕೆ.ಚಂದ್ರಶೇಖರ ಅವರ ಪತ್ನಿ ಹಾಗೂ ರಂಗತಜ್ಞೆ ಲಕ್ಷ್ಮಿ ಚಂದ್ರಶೇಖರ್ ನಮಗೆ ಮೊದಲ ಪಿ.ಯು.ಸಿ.ಯಲ್ಲಿ ಇಂಗ್ಲಿಷ್ ಪಾಠ ಮಾಡಿದ್ದರು. ಗಣಿತ ಪಾಠ ಮಾಡಿದ BGS - ಬಿ.ಜಿ.ಶ್ರೀನಿವಾಸಮೂರ್ತಿ ಕೊನೆಯ ಪರೀಕ್ಷೆಯಲ್ಲಿ 100/100 ತೆಗೆದುಕೊಳ್ಳಲು ಇಂಬುಕೊಟ್ಟವರು. MKK - ಎಂ.ಕೆ.ಕೇಶವಸ್ವಾಮಿ ವಿದೇಶದಲ್ಲಿ ಇಂಗ್ಲಿಷ್ ಪಾಠ ಮಾಡಿ ಬಂದಿದ್ದವರು,ಸದಾ ಜುಬ್ಬ, ಕ್ಲೋಸ್ ಕಾಲರ್ ಕೋಟು, ಕಚ್ಚೆಪಂಚೆ ಧರಿಸುತ್ತಿದ್ದವರು. ಹೆಸರು ನೆನಪಿನಲ್ಲಿಲ್ಲ, ರವೀಂದ್ರನಾಥ ಟಾಗೋರ್ ಅವರ ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯೊಂದು ನಮಗೆ ನಾನ್-ಡೀಟೇಲ್ಡ್ ಟೆಕ್ಸ್ಟ್ ಆಗಿತ್ತು, MKK ತೆಗೆದುಕೊಳ್ಳುತ್ತಿದ್ದರು. ನನ್ನ ಬಗ್ಗೆ ಏನೂ ಕಾಮೆಂಟ್ ಮಾಡದ NAR, BGS, MJS ತರಗತಿಗಳಲ್ಲಿ ನಾನು ಗಂಭೀರವಾಗಿ ಕುಳಿತುಕೊಳ್ಳುತ್ತಿದ್ದೆನೇನೊ? MJS ಬಯಾಲಜಿ ತೆಗೆದುಕೊಳ್ಳುತ್ತಿದ್ದರು, ನನಗವರ ಕ್ಲಾಸ್ ಇಷ್ಟವಾಗುತ್ತಿತ್ತ್ತು.)
07-10-1978 ಇಂದ 14-11-1978 (38 ದಿವಸ ರಜಾ)
Total ಖರ್ಚು = ರು. 84.75
Average = ರು. 2.25/day
ಓದಿದ್ದು ಗಂಟೆಗಳಲ್ಲಿ = 152.30
Average = 4 ಗಂ./day
ಅಡಿ ಟಿಪ್ಪಣಿ: (ಈ ಬಗೆಯ ಸರಾಸರಿಯ ಲೆಕ್ಕಾಚಾರ ಮಾಡುವುದು ಅಂದಿನ ಹವ್ಯಾಸಗಳಲ್ಲಿ ಒಂದಾಗಿತ್ತು. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ರಜಾದಿನಗಳಲ್ಲಿ ಸರಾಸರಿ ನಾಲ್ಕು ಗಂಟೆಗಳ ಕಾಲ ಮಾತ್ರ ಓದುತ್ತಿದ್ದ ವಿಷಯ ಇಂದಿನ ವಿಶ್ಲೇಷಣೆಯಲ್ಲಿ ಕಡಿಮೆ. ಹಾಗೆಯೇ ಐದು ಮತ್ತು ಹತ್ತು ಪೈಸೆಗಳ ಲೆಕ್ಕಾಚಾರ ಹಾಕುತ್ತಿದ್ದವನು ಯಾವ ಬಾಬಿಗಾಗಿ ಸರಾಸರಿ ದಿನವೊಂದಕ್ಕೆ ರು.2-25 ಖರ್ಚು ಮಾಡಿದ್ದ ಎಂಬ ಅನುಮಾನ ಹಾಗೆಯೇ ಉಳಿಯುತ್ತದೆ. ವಿವರಗಳು ಮುಂದಿನ ಕಂತುಗಳಲ್ಲಿ.)
No comments:
Post a Comment